Date : 05-01-2015
ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ವಾಣಿಜ್ಯ ಉಪನ್ಯಾಸಕರ ತರಬೇತಿ ಕಾರ್ಯಕ್ರಮವು ದಿನಾಂಕ 8-1-2015 ರಿಂದ 12-1-2015 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಕಾರಣ, ದಿನಾಂಕ 8-1-2015 ರ ಗುರುವಾರದಂದು ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ವಿಕಾಸ ಪದವಿಪೂರ್ವ ಕಾಲೇಜಿನಲ್ಲಿ ನಡೆಯಬೇಕಿದ್ದ ಒಂದು ದಿನದ ಕಾರ್ಯಾಗಾರವನ್ನು ದಿನಾಂಕ 14-1-2015 ರ ಬುಧವಾರಕ್ಕೆ ಮುಂದೂಡಲಾಗಿದೆ. ಕಾರ್ಯಕ್ರಮವು ಪೂರ್ವ ನಿಗದಿಯಾದಂತೆ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಎಲ್ಲಾ ಪ್ರಾಚಾರ್ಯರು ಈ ಬದಲಾವಣೆಯನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಗಮನಕ್ಕೆ ತರಲು ವಿನಂತಿಸಲಾಗಿದೆ. […]